Wednesday, April 30, 2025
HomeKPSC JOBSKPSC invites applications for Data Entry Operator' Posts 2022

KPSC invites applications for Data Entry Operator’ Posts 2022

KPSC ಇಂದ ಡಾಟಾ ಎಂಟ್ರಿ ಆಪರೇಟರ್‌’ ಹುದ್ದೆಗಳ ಅರ್ಜಿ ಆಹ್ವಾನ 2022


ಕರ್ನಾಟಕ ಲೋಕಸೇವಾ ಆಯೋಗವು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

Highlights

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅಧಿಸೂಚನೆ.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಹುದ್ದೆ.
ಅರ್ಜಿಗೆ 05 Nev 2022 ಕೊನೆ ದಿನ.
ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಇದೀಗ ರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಹೈದೆರಾಬಾದ್ ಕರ್ನಾಟಕ ವೃಂದದ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಪಿಯುಸಿ ಪಾಸಾದವರು (10+2) ಅರ್ಜಿ ಸಲ್ಲಿಸಬಹುದು. ಇತರೆ ಹೆಚ್ಚಿನ ಮಾಹಿತಿಗಳು ಈ ಕೆಳಗಿನಂತಿವೆ.

ಡಾಟಾ ಎಂಟ್ರಿ ಆಪರೇಟರ್ ಹುದ್ದೆಯ ವಿವರ:
ಉದ್ಯೋಗ ಇಲಾಖೆ : ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ
ಹುದ್ದೆ ಹೆಸರು : ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್
ಹುದ್ದೆಗಳ ಸಂಖ್ಯೆ : 13HK
ವಿದ್ಯಾರ್ಹತೆ : ದ್ವಿತೀಯ ಪಿಯುಸಿ / 12ನೇ ತರಗತಿ
ವೇತನ ಶ್ರೇಣಿ : ರೂ.21,400 ರಿಂದ 42,000 ವರೆಗೆ.
ಅರ್ಜಿ ಶುಲ್ಕ ಎಷ್ಟು?
  • ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600.
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
  • ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
  • ರೂ.35 ರ ಅರ್ಜಿ ಪ್ರಕ್ರಿಯೆ ಶುಲ್ಕವನ್ನು ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಪಾವತಿಸಬೇಕು.
ವಯಸ್ಸಿನ ಅರ್ಹತೆಗಳು

  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
  • ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ.
  • ಎಸ್‌ಸಿ / ಎಸ್‌ಟಿ / ಪ್ರ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ.
ಆಯ್ಕೆ ಪ್ರಕ್ರಿಯೆ : ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸುವ ವಿಧಾನ

ಈ ಮೇಲಿನ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ 3 ಹಂತಗಳು ಇರುತ್ತವೆ.
1ನೇ ಹಂತ : ಪ್ರೊಫೈಲ್ ಕ್ರಿಯೇಟ್‌ / ಅಪ್‌ಡೇಟ್‌
2ನೇ ಹಂತ : ಅಪ್ಲಿಕೇಶನ್ ಸಬ್‌ಮಿಷನ್
3ನೇ ಹಂತ : ಅಪ್ಲಿಕೇಶನ್‌ ಶುಲ್ಕ ಪಾವತಿ ಮಾಡುವುದು.
ಪ್ರಮುಖ ದಿನಾಂಕಗಳು
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 07-10-2022
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05-11-2022
  • ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 07-11-2022
✅ಡಾಟಾ ಎಂಟ್ರಿ ಆಪರೇಟರ್ ಹುದ್ದೆಯ ಪ್ರಮುಖ ಲಿಂಕ್ :👇🏻

ಅಧಿಕೃತ ವೆಬ್ ಸೈಟ್: Click here

🌐ಕರ್ನಾಟಕ ಲೋಕಸೇವಾ ಆಯೋಗವು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್‌ ಅನ್ನು ಶೀಘ್ರದಲ್ಲೇ ಇಂದು (ಅಕ್ಟೋಬರ್ 07 ) https://www.kpsc.kar.nic.in/ ನಲ್ಲಿ ಬಿಡುಗಡೆ ಮಾಡಲಿದೆ.
KPSC ಇಂದ ಡಾಟಾ ಎಂಟ್ರಿ ಆಪರೇಟರ್‌’ ಹುದ್ದೆಗಳ ಅರ್ಜಿ ಆಹ್ವಾನ 2022
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments