Monday, April 21, 2025
HomeISRO JOBSISRO Recruitment 2024

ISRO Recruitment 2024

 

ಇಸ್ರೋ ನೇಮಕಾತಿ 2024 – ISRO Recruitment 2024

ISRO Recruitment 2024 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಸೈಂಟಿಸ್ಟ್, ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

ISRO Recruitment 2024 : Details of Vacancies

ಹುದ್ದೆ : ಸೈಂಟಿಸ್ಟ್, ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟಂಟ್, ಸೈಂಟಿಫಿಕ್ ಅಸಿಸ್ಟಂಟ್, ಲೈಬ್ರರಿ ಅಸಿಸ್ಟಂಟ್, ಟೆಕ್ನಿಷಿಯನ್-ಬಿ, ಡ್ರಾಪ್ಟಮನ್ಸ್-ಬಿ, ಕುಕ್, ಪೈರಮನ್-ಎ, ಹೆವಿ ವೆಹಿಕಲ್ ಡ್ರೈವರ್-ಎ, ಲೈಟ್ ವೆಹಿಕಲ್ ಡ್ರೈವರ್-ಎ

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 224 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆ ಹುದ್ದೆಗಳ ಸಂಖ್ಯೆ ವೇತನ
ಸೈಂಟಿಸ್ಟ್, ಇಂಜಿನಿಯರ್ 5 56,100
ಟೆಕ್ನಿಕಲ್ ಅಸಿಸ್ಟಂಟ್ 55 44,900
ಸೈಂಟಿಫಿಕ್ ಅಸಿಸ್ಟಂಟ್ 6 44,900
ಲೈಬ್ರರಿ ಅಸಿಸ್ಟಂಟ್ 1 44,900
ಟೆಕ್ನಿಷಿಯನ್-ಬಿ 126 21,700
ಡ್ರಾಪ್ಟಮನ್ಸ್-ಬಿ 16 21,700
ಕುಕ್ 4 19,900
ಪೈರಮನ್-ಎ 3 19,900
ಹೆವಿ ವೆಹಿಕಲ್ ಡ್ರೈವರ್-ಎ 6 19,900
ಲೈಟ್ ವೆಹಿಕಲ್ ಡ್ರೈವರ್-ಎ 2 19,900

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಎಸ್.ಎಸ್.ಎಲ್.ಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ವಯೋಮಾನ : ದಿನಾಂಕ 01/03/2024ಕ್ಕೆ ಅಭ್ಯರ್ಥಿಗಳು ಗರಿಷ್ಠ 18 ವರ್ಷ ಪೂರೈಸಿರಬೇಕು.
• ಸೈಂಟಿಸ್ಟ್, ಇಂಜಿನಿಯರ್ – ಗರಿಷ್ಠ 30 ವರ್ಷ
• ಟೆಕ್ನಿಕಲ್ ಅಸಿಸ್ಟಂಟ್, ಸೈಂಟಿಫಿಕ್ ಅಸಿಸ್ಟಂಟ್, ಲೈಬ್ರರಿ ಅಸಿಸ್ಟಂಟ್ – ಗರಿಷ್ಠ 35 ವರ್ಷ
• ಟೆಕ್ನಿಷಿಯನ್-ಬಿ, ಡ್ರಾಪ್ಟಮನ್ಸ್-ಬಿ, ಕುಕ್ – ಗರಿಷ್ಠ 35 ವರ್ಷ
• ಪೈರಮನ್-ಎ – ಗರಿಷ್ಠ 25 ವರ್ಷ
• ಹೆವಿ ವೆಹಿಕಲ್ ಡ್ರೈವರ್-ಎ, ಲೈಟ್ ವೆಹಿಕಲ್ ಡ್ರೈವರ್-ಎ – ಗರಿಷ್ಠ 35 ವರ್ಷ

ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ/ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ/ ಸ್ಕಿಲ್ ಟೆಸ್ಟ್/ ಡ್ರೈವಿಂಗ್ ಟೆಸ್ಟ್ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :
• ಸೈಂಟಿಸ್ಟ್, ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟಂಟ್, ಸೈಂಟಿಫಿಕ್ ಅಸಿಸ್ಟಂಟ್ ಹುದ್ದೆಗೆ,
ಅರ್ಜಿ ಶುಲ್ಕ – ರೂ. 250
ಪ್ರೊಸೆಸಿಂಗ್ ಶುಲ್ಕ – ರೂ. 750

• ಟೆಕ್ನಿಷಿಯನ್-ಬಿ, ಡ್ರಾಪ್ಟಮನ್ಸ್-ಬಿ, ಕುಕ್, ಪೈರಮನ್-ಎ, ಹೆವಿ ವೆಹಿಕಲ್ ಡ್ರೈವರ್-ಎ, ಲೈಟ್ ವೆಹಿಕಲ್ ಡ್ರೈವರ್-ಎ ಹುದ್ದೆಗೆ,
ಅರ್ಜಿ ಶುಲ್ಕ – ರೂ. 100
ಪ್ರೊಸೆಸಿಂಗ್ ಶುಲ್ಕ – ರೂ. 500
(ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರೊಸೆಸಿಂಗ್ ಶುಲ್ಕ ಮರುಪಾವತಿಸಲಾಗುತ್ತದೆ)

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಫೆಬ್ರುವರಿ 10, 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮಾರ್ಚ್ 01, 2024

ISRO Recruitment 2024 : Important Links

NOTIFICATION CLICK HERE
APPLY ONLINE CLICK HERE
Telegram Join Link Click Here
WhatsApp Channel Link Click Here
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments