Wednesday, April 30, 2025
HomePc kye answer454 Civil PC Exam Provisional Key Answer:

454 Civil PC Exam Provisional Key Answer:

 

454 ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌ ಲಿಖಿತ ಪರೀಕ್ಷೆ ಸರಿಯುತ್ತರಗಳು ಪ್ರಕಟ: ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ..


454 Civil PC Exam Provisional Key Answer: ರಾಜ್ಯ ಪೊಲೀಸ್‌ ಇಲಾಖೆಯು ಕಲ್ಯಾಣ ಕರ್ನಾಟಕ ಪ್ರದೇಶದ 454 ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್) ಹುದ್ದೆಗಳ ಲಿಖಿತ ಪರೀಕ್ಷೆಯ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಚೆಕ್‌ ಮಾಡಲು ಲಿಂಕ್ ಇಲ್ಲಿ ನೀಡಲಾಗಿದೆ.

ಹೈಲೈಟ್ಸ್‌:

  • ಸಿವಿಲ್ ಪಿಸಿ ಪರೀಕ್ಷೆ ಸರಿಯುತ್ತರಗಳು ಬಿಡುಗಡೆ.
  • ಡಿಸೆಂಬರ್ 10 ರಂದು ಪರೀಕ್ಷೆ ನಡೆಸಲಾಗಿತ್ತು.
  • ತಾತ್ಕಾಲಿಕ ಸರಿಯುತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.

ಕರ್ನಾಟಕ ಪೊಲೀಸ್‌ ಇಲಾಖೆಯು ದಿನಾಂಕ 10-12-2023 ರಂದು ನಡೆಸಲಾದ ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌ ಲಿಖಿತ ಪರೀಕ್ಷೆಗೆ ಸಂಬಂಧಿತ ತಾತ್ಕಾಲಿಕ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ಸರಿಯುತ್ತರಗಳನ್ನು ಚೆಕ್‌ ಮಾಡಿಕೊಳ್ಳಬಹುದು. ಸದರಿ ಉತ್ತರಗಳಿಗೆ ಆಕ್ಷೇಪಣೆ ಇದ್ದಲ್ಲಿ ನಿಗದಿತ ದಿನಾಂಕದೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಕಲ್ಯಾಣ – ಕರ್ನಾಟಕ ಪ್ರದೇಶದ ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್) (ಪುರುಷ ಮತ್ತು ಮಹಿಳಾ) ಮತ್ತು (ತೃತೀಯಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ – 454 ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 10, 2023 ರಂದು ಪರೀಕ್ಷೆ ನಡೆಸಲಾಗಿತ್ತು.

– ಸಿಪಿಸಿ 454 ಹುದ್ದೆಗಳ ನೇಮಕ ಪ್ರಕ್ರಿಯೆ ಅಂತರ್ಜಾಲ ವಿಳಾಸ https://cpc454.ksp-recruitment.in/ ಕ್ಕೆ ಭೇಟಿ ನೀಡಿ.
– ಮುಖಪುಟ ತೆರೆದ ನಂತರ ‘ News & Events’ ಕಾರ್ನರ್‌ನಲ್ಲಿ ಗಮನಿಸಿ.
– ಡಿಸೆಂಬರ್ 15 ರಂದು ಅಪ್‌ಡೇಟ್‌ ಮಾಡಲಾದ ‘ CPC454 Posts – Click here to download Provisional Answer Key for Written Examination held on 10.Dec.2023’ ಎಂದಿರುವ ಲಿಂಕ್‌ ಕ್ಲಿಕ್ ಮಾಡಿ.
– ಸರಿಯುತ್ತರಗಳ ಪಿಡಿಎಫ್‌ ಫೈಲ್ ತೆರೆಯುತ್ತದೆ.

– ಅಭ್ಯರ್ಥಿಗಳು ತಾವು ಉತ್ತರಿಸಿದ ಪ್ರಶ್ನೆ ಪತ್ರಿಕೆ ಸೀರೀಸ್‌ ಪ್ರಕಾರ ಸರಿಯುತ್ತರಗಳನ್ನು ಚೆಕ್‌ ಮಾಡಿಕೊಳ್ಳಬಹುದು.

454 CPC Exam Provisional Key Answer Link
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments